top of page

ಮುನಿರತ್ನ ವಿರುದ್ಧ ದಾಖಲಾಯ್ತು ಮತ್ತೊಂದು ಎಫ್‌ಐಆರ್!

  • Writer: vishwa patha
    vishwa patha
  • Dec 1, 2024
  • 1 min read


ಮಹಿಳೆ ಮೇಲೆ ಅತ್ಯಾಚಾರ ಹಾಗೂ ಜಾತಿನಿಂದನೆ, ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಕೇಸ್‌ಗಳಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಆರೋಪಗಳು ಮುನಿರತ್ನ ಅವರ ಮೇಲಿದ್ದು, ಈಗ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.


ಕೊಲೆಗೆ ಯತ್ನ, ಸುಪಾರಿ ನೀಡಿರುವುದು ಹಾಗೂ ಮಹಿಳೆಗೆ ಮಾನಹಾನಿ ಮಾಡಿರುವ ಆರೋಪದಡಿ ಶಾಸಕ ಮುನಿರತ್ನ ಅವರ ವಿರುದ್ಧ ಬೆಂಗಳೂರಿನ ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಕೇಸ್‌​ ದಾಖಲಾಗಿದೆ. ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಎಂಬುವರು ದೂರು ನೀಡಿದ್ದಾರೆ.


ಈ ದೂರಿನ ಮೇರೆಗೆ ಶಾಸಕ ಮುನಿರತ್ನ ಸೇರಿದಂತೆ ಹಲವು ಮಹಿಳೆಯರ ವಿರುದ್ಧ ಕೇಸ್‌ ದಾಖಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಮುನಿರತ್ನ ಮೇಲಿರುವ ಜಾತಿ ನಿಂದನೆ ಕೇಸ್‌ ಸಂಬಂಧ ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇತ್ತ ಮುನಿರತ್ನ ವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿ ಸಂಕಷ್ಟ ತಂದೊಡ್ಡಿದೆ.

Comments


bottom of page